ಫುಲ್ವಾರ ಎಣ್ಣೆ ಯನ್ನು ಫುಲ್ವಾರ ಬೀಜದಿಂದ ತೆಗೆಯಲಾಗುತ್ತದೆ. ಈ ಮರವನ್ನು ಇನ್ನೂ ಫಲ್ವಾರ, ಛುರ, ಛೌರಿ ಎಂದೂ ಕರೆಯುತ್ತಾರೆ. ಇದು ಸಪೊಟೆಸಿ() ಸಸ್ಯ ಕುಟುಂಬಕ್ಕೆ ಸೇರಿದ ಮರ. ಇದರ ಸಸ್ಯ ಶಾಸ್ತ್ರ ಹೆಸರುಡಿಪ್ಲೊನೆಮ ಬುಟೇರೆಸಿ( ). ಇದನ್ನು ಬಿಟ್ಟು ಇನ್ನು ಅನೇಕ ಜಾತಿಗಳಿವೆ. ಅವು ಅಷೆಡ್ರಾ ಬುಟೆರೆಸಿ ( ), ಮತ್ತು ಬಸ್ಸಿಯ ಬುಟೆರೆಸಿ( ). ಈ ಮರವನ್ನು ಇಂಡಿಯನ್ ಬಟ್ಟರು ಟ್ರೀ( )ಎಂದೂ ಕರೆಯುತ್ತಾರೆ == ಆವಾಸ == ಇದನ್ನು ಭಾರತದಲ್ಲಿನ ಉಪ ಹಿಮಾಲಯ ಹರವು/ಬಯಲು ಪ್ರಾಂತದಲ್ಲಿ, ಹಿಮಾಲಯ ಸುತ್ತವರಿದ ,ಕುಮೋನ್() ಪೂರ್ವದಿಂದಸಿಕ್ಕಿಂ, ಉತ್ತರ ದಿಕ್ಕಾಗಿ ಬಂಗಾಲ, ಮತ್ತು ಬೂಟಾನ್ (ಬುಟಾನ್ ಭಾರತ ದೇಶಭಾಗವಲ್ಲ)ಇನ್ನೂ ಅಂಡಮಾನ್-ನಿಕೋಬಾರ್ ದ್ವೀಪಗಳ ಸಮೂಹ ಪ್ರಾಂತ್ಯದಲ್ಲಿ ಬೆಳೆಯಲಾಗುತ್ತದೆ. == ಮರ == ಇದು ಎಲೆಯುದುರಿಸುವ, ಎತ್ತರವಾಗಿ ಬೆಳೆಯುವ ಮರ. ಇದು ಸಾಧಾರಣವಾಗಿ ೧೫ ಮೀಟರುಗಳ(೪೬ಅಡಿ)ಎತ್ತರ ಬೆಳೆಯುತ್ತದೆ. ಕಾಂಡದ ಅಡ್ಡಳತೆ ೬-೧೦ ಮೀ.ಇರುತ್ತದೆ. ನೇಪಾಲ್, ಸಿಕ್ಕಿಂ ಕಾಡುಗಳಲ್ಲಿ ೪೦ ಮೀಟರ್ ಎತ್ತರ ಬೆಳೆದಿರುವ ಮರಗಳು ಕಂಡು ಬರುತ್ತವೆ. ಇವು ಸಮುದ್ರ ಮಟ್ಟದಿಂದ ೭೦೦-೧೫೦೦ ಮೀಟರುಗಳ ಎತ್ತರದಲ್ಲಿಯು ಬೆಳೆಯುತ್ತವೆ. ಇವು ಹೆಚ್ಚಾಗಿ, ಪರ್ವತ ಕಣಿವೆ/ತಗ್ಗು ಪ್ರದೇಶ, ತೊರೆ ಕೆರೆ , ಪರ್ವತ ಏರು ನೆಲದಲ್ಲಿ ಬೆಳೆಯುತ್ತವೆ. ಎಲೆಗಳು ನಸು ಕೆಂಪಾಗಿ ಮತ್ತು ಬೆಳ್ಳಗೆ ಇರುತ್ತವೆ. ಎಲೆಗಳು ಗುಂಪಾಗಿ ಕೊಂಬೆಗಳ ಕಡೆಯಲ್ಲಿ ಬೆಳೆಯುತ್ತವೆ. ಎಲೆಗಳು ಚೂಪಲ್ಲದ ಅಂಚನ್ನು ಹೊಂದಿ, ದೀರ್ಘ ಅಂಡಾಕಾರವಾಗಿರುತ್ತವೆ. ಫುಲ್ವಾರ ಮರ ೫-೧೦ ವರ್ಷಕ್ಕೆ ಬಲಿತು/ಪಕ್ವ ವಾಗುತ್ತದೆ. ೫೦-೬೦ವರ್ಷದ ವರೆಗೆ ಫಲವನ್ನು ಕೊಡುತ್ತದೆ. ಒಂದು ಮರದಿಂದ ವರ್ಷಕ್ಕೆ ೧೦೦-೨೫೦ಕಿಲೋ ಹಣ್ಣು ಬರುತ್ತದೆ. ಮಳೆಯ ಅಳತೆ ೧೦೦೦-೨೫೦೦ ಮಿ.ಮೀ. ಇರಬೇಕು. ತೇವ ಇರುವ ಪ್ರದೇಶಗಳಲ್ಲಿ ಈ ಮರ ಚೆನ್ನಾಗಿ ಬೆಳೆಯುತ್ತದೆ. ಹೂಗಳು ಅರಳುವ/ವಿಕಸಿಸುವ ಸಮಯ ಏಪ್ರಿಲ್-ಮೇ ತಿಂಗಳುಗಳು. ಹೂವು ಬೆಳ್ಳಗೆ ಇಲ್ಲವೆ ಬಣ್ಣಗೆಟ್ಟ ಅರಿಶಿನ ಬಣ್ಣದಲ್ಲಿ ಇರುತ್ತವೆ. ಜಿಗುಟು ಪರಿಮಳ ಹೊಂದಿರುತ್ತದೆ. ಹಣ್ಣುಗಳೊಳಗೆ ಬಾದಾಮಿ ಆಕಾರದ ೨-೨.೫ ಸೆ.ಮೀ.ಪ್ರಮಾಣವುಳ್ಳ ವಿತ್ತನ ಇರುತ್ತದೆ. ಮೇ-ಆಗಸ್ಟು ತಿಂಗಳುಗಳ ಮಧ್ಯಕಾಲದಲ್ಲಿ ಕಾಯಿ ಹಣ್ಣಾಗುತ್ತದೆ. ಹಣ್ಣಿನಲ್ಲಿ ೮.೫%ರಷ್ಟು ಸಕ್ಕರೆ ಪದಾರ್ಥಗಳು, ೫.೬% ಕಚ್ಚ ನಾರಿನ ಪದಾರ್ಥವನ್ನು ಹೊಂದಿರುತ್ತದೆ. ವಿತ್ತನವು ಕಪ್ಪಾಗಿ, ೧.೮-೨.೦ಸೆಂ.ಮೀ.ಉದ್ದವಾಗಿ ಇರುತ್ತದೆ. ವಿತ್ತನ ಹೊಳಗಿನ ಬೀಜ/ಕಾಳು()ಬೆಳ್ಳಗೆ ಮೂತ್ರ ಪಿಂಡಾಕಾರದಲ್ಲಿರುತ್ತದೆ. ಹಣ್ಣಿನಲ್ಲಿ ವಿತ್ತನ ೨೦% ಇರುತ್ತದೆ. ವಿತ್ತನದಲ್ಲಿ ಎಣ್ಣೆ ೪೨-೪೭%, ತೊಗಟೆ ತೆಗೆದ ಬೀಜ()ದಲ್ಲಿ ಎಣ್ಣೆ ೬೧%ವರೆಗೆ ಇರುತ್ತದೆ, ಮತ್ತು ಪ್ರೊಟಿನ್ ವಿತ್ತನದಲ್ಲಿ ೧೮% ತನಕ ಲಭ್ಯವಾಗುತ್ತದೆ. ಭಾರತದಲ್ಲಿ ೫ ಸಾವಿರ ಟನ್ನುಗಳ ಪಲ್ವಾರ ವಿತ್ತನವನ್ನು ಶೇಖರಣಮಾಡುವ ಅವಕಾಶವಿದೆ. == ಎಣ್ಣೆ ಉತ್ಪಾದನೆ == ಫಲ್ವಾರ ವಿತ್ತನವನ್ನು ನೇರವಾಗಿ ಕ್ರಷ್()ಮಾಡಿ, ಇಲ್ಲವೆ ವಿತ್ತನದ ಮೇಲಿದ್ದ ಹೊಟ್ಟನ್ನು ತೆಗೆದ ಮೇಲೆ ಎಕ್ಸುಪೆಲ್ಲರುಗಳಲ್ಲಿ ಕ್ರಷ್()ಮಾಡಿ ಎಣ್ಣೆಯನ್ನು ತೆಗೆಯಲಾಗುತ್ತದೆ. ಗ್ರಾಮದಲ್ಲಿ ಇರುವ ಗಾಣದಿಂದಲೂ ಎಣ್ಣೆಯನ್ನು ತೆಗೆಯಬಹುದು. ಆದರೆ ಹಿಂಡಿಯಲ್ಲಿ ಹೆಚ್ಚಿನ ಪ್ರತಿಶತದಲ್ಲಿ ಎಣ್ಣೆ ಉಳಿದಿರುತ್ತದೆ. ಎಕ್ಸುಪೆಲ್ಲರುನಿಂದ ಬಂದ ಹಿಂಡಿಯಲ್ಲಿ ೮-೧೦% ವರೆಗೆ ಎಣ್ಣೆ ಉಳಿದಿರುತ್ತದೆ. ಹಿಂಡಿಯಲ್ಲಿರುವ ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ ನಲ್ಲಿ ತೆಗೆಯುತ್ತಾರೆ. == ಎಣ್ಣೆಯ ಗುಣ ಮತ್ತು ಲಕ್ಷಣಗಳು == ಎಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಆಮ್ಲಗಳು ಪ್ರತಿಶತ ಹೆಚ್ಚಾಗಿ ಇರುತ್ತದೆ .ಅದರಿಂದ ಫಲ್ವರಾ ಎಣ್ಣೆಯನ್ನು ಫಲ್ವರಾ ಬೆಣ್ಣೆ/ಬಟ್ಟರು( )ಎಂದು ಕರೆಯುತ್ತಾರೆ. ಇದು ತುಪ್ಪ/ನೆಯ್ ತರಹ ಇರುತ್ತದೆ. ಎಣ್ಣೆಯನ್ನು ಹೆಚ್ಚುಕಾಲ ದಾಸ್ತಾನು ಮಾಡಿದರೂ, ಹಾಳಾಗುವುದಿಲ್ಲ. ಎಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಆಮ್ಲಗಳಾದ ಪಾಮಿಟಿಕ್ ೫೫-೫೬%ವರೆಗೆ, ಮತ್ತು ಸ್ಟಿಯರಿಕ್ ಆಮ್ಲ ೩-೬% ಇರುತ್ತವೆ. ಅಸಂತೃಪ್ತ ಕೊಬ್ಬಿನ ಆಮ್ಲ, ಒಲಿಕ್ ಆಮ್ಲ ೩೫-೩೬.೦% ತನಕ, ಲಿನೊಲಿಕಾಮ್ಲ ೩-೬.೦%ವರೆಗೆ ಇರುತ್ತವೆ. ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ವಿವರಣಾ ಪಟ್ಟಿ ಎಣ್ಣೆಯ ಭೌತಿಕ ಧರ್ಮಗಳು ನೋಡು:*=ಕೆಲವು ಎಣ್ಣೆಯಲ್ಲಿ. === ಎಣ್ಣೆಯ ಉಪಯುಕ್ತತೆಗಳು === ಕೋಕೋ ಬಟ್ಟರು ಪ್ರತಿಯಾಗಿ ಫುಲ್ವಾರ ಎಣ್ಣೆಯನ್ನು ಬಳಸುತ್ತಾರೆ. ವನಸ್ಪತಿ ತಯಾರಿಕೆಯಲ್ಲಿಯು ಉಪಯೋಗಿಸುತ್ತಾರೆ. ಇದನ್ನು ದೀಪದ ಎಣ್ಣೆಯಾಗಿ, ಸಿಹಿ ಪದಾರ್ಥ ತಯಾರಿಕೆಯಲ್ಲಿ, ಔಷಧೀಯ ಪದಾರ್ಥ ತಯಾರಿಕೆಯಲ್ಲಿ, ಸಾಬೂನ್ ತಯಾರಿಯಲ್ಲಿ, ಮತ್ತು ಕ್ಯಾಂಡಲ್(ಮೋಂಬತ್ತಿ)ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ == ಉಲ್ಲೇಖನ ==